ಬಾರ್ಥೊಲಿನಸ್, ಕ್ಯಾಸ್ಟರ್ (ಒಂದನೆಯ)		
1585-1628. ಸ್ವೀಡನ್ನಿನ ಪ್ರತಿಭಾವಂತ ವಿದ್ವಾಂಸ ಹಾಗೂ ವೈದ್ಯ ಮತ್ತು ಅಂಗರಚನಾವಿಜ್ಞಾನಿ. ಥಾಮಸ್ ಬಾರ್ಥೊಲಿನ್‍ಸನ ತಂದೆ. ಪಾಡುವ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಪ್ರಾಧ್ಯಾಪಕನಾಗಿ ಪ್ರಸಿದ್ಧಿ ಪಡೆದಿದ್ದ, ಫ್ಯಾಬ್ರೇಷಿಯಸ್ಸನ ಕೈಕೆಳಗೆ ವ್ಯಾಸಂಗಿಸಿ 1610ರಲ್ಲಿ ಎಂ.ಡಿ. ಪದವಿ ಪಡೆದ. ವಿದ್ಯಾರ್ಥಿಯಾಗಿದ್ದಾಗಲೇ ಈತನ ಬಹುಮುಖ ಪ್ರತಿಭೆ ಗುರುತಿಸಿ ಮೇಲಿಂದ ಮೇಲೆ ತತ್ತ್ವಶಾಸ್ತ್ರ, ದೇಹರಚನಾಶಾಸ್ತ್ರ, ಅನಂತರ ಗ್ರೀಕ್ ಭಾಷೆಯ, ಪ್ರಾಧ್ಯಾಪಕ ಹುದ್ದೆಗಳನ್ನು ಒಪ್ಪಿಕೊಳ್ಳುವಂತೆ ಆಮಂತ್ರಿಸಿದ್ದರಾದರೂ ಅವನ್ನೆಲ್ಲ ಈತ ನಿರಾಕರಿಸಿದ್ದ. 1613ರಲ್ಲಿ ಕೋಪನ್ ಹೇಗನ್ ವಿಶ್ವವಿದ್ಯಾಲಯದ ವೈದ್ಯಕೀಯ ಪ್ರಾಧ್ಯಾಪಕನಾಗಿ ನೇಮಿಸಲ್ಪಟ್ಟು ಅಲ್ಲಿ ಬಂದು ನೆಲಸಿದ.	(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ